ವಿಕಿಪೀಡಿಯ knwiki https://kn.wikipedia.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.46.0-wmf.24 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಪೀಡಿಯ ವಿಕಿಪೀಡಿಯ ಚರ್ಚೆಪುಟ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆಪುಟ ಕರಡು ಕರಡು ಚರ್ಚೆಪುಟ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಯಶವಂತ ಚಿತ್ತಾಲ 0 4235 1371714 1371617 2026-04-19T15:58:06Z Mahaveer Indra 34672 unsupported template data removed 1371714 wikitext text/x-wiki {{Infobox Writer | name = ಯಶವಂತ ಚಿತ್ತಾಲ | image = YashwantVithobaChittal.jpg | imagesize = (ಚಿತ್ರದ ಗಾತ್ರ - default is 300px) | caption = ಯಶವಂತ ಚಿತ್ತಾಲ | pseudonym = | birth_date = ಆಗಸ್ಟ್ ೩, ೧೯೨೮ | birth_place = ಹನೇಹಳ್ಳಿ, [[ಉತ್ತರ ಕನ್ನಡ]] ಜಿಲ್ಲೆ, [[ಕರ್ನಾಟಕ]] | death_date = ಮಾರ್ಚ್ ೨೨, ೨೦೧೪ | death_place = [[ಮುಂಬಯಿ]], [[ಮಹಾರಾಷ್ಟ್ರ]] | occupation = ರಸಾಯನ ತಂತ್ರಜ್ಞ, ಲೇಖಕ | nationality = ಭಾರತೀಯ | period = (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) | genre = ಕಥೆ, ಕಾದಂಬರಿ | subject = | movement = | influenced = | signature = |website = }} '''ಯಶವಂತ ಚಿತ್ತಾಲ''' - <ref>{{Cite web |url=http://www.hindu.com/fr/2008/03/07/stories/2008030751500300.htm |title=ಆರ್ಕೈವ್ ನಕಲು |access-date=2014-03-23 |archive-date=2012-11-04 |archive-url=https://web.archive.org/web/20121104051435/http://www.hindu.com/fr/2008/03/07/stories/2008030751500300.htm |url-status=dead }}</ref>[[ಕನ್ನಡ|ಕನ್ನಡದ]] ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಅರವತ್ತಾರು ಕಥೆಗಳನ್ನು ಬರೆದಿರುವ ಚಿತ್ತಾಲರು [[ಉತ್ತರ ಕನ್ನಡ]] ಜಿಲ್ಲೆಯ ಚಿಕ್ಕ ಗ್ರಾಮವಾದ ಹನೇಹಳ್ಳಿಯವರು. ಪಾಲಿಮರ್ ಟೆಕ್ನೊಲಜಿ ಓದಿ [[ಮುಂಬಯಿ|ಮುಂಬಯಿಯಲ್ಲೇ]] ನೆಲೆಸಿದರು. ==ಜೀವನ== ಉತ್ತರ ಕನ್ನಡ ಜಿಲ್ಲೆಯ [[ಕುಮಟಾ]] ತಾಲ್ಲೂಕಿನ 'ಹನೇಹಳ್ಳಿ'ಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ.<ref>http://www.thehindu.com/todays-paper/tp-national/tp-karnataka/yashwant-chittal-dead/article5821000.ece</ref> ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ [[ಕೊಂಕಣೀ]]-[[ಮರಾಠಿ]]. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, [[ಧಾರವಾಡ]], [[ಮುಂಬಯಿ]] ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ [[ಅಮೆರಿಕ]]ದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ [[ಗಂಗಾಧರ ಚಿತ್ತಾಲ]]ರು ಇವರ ಅಣ್ಣ. [[ಶಾಂತಿನಾಥ ದೇಸಾಯಿ]]ಯವರು ಮತ್ತು [[ಗೌರೀಶ ಕಾಯ್ಕಿಣಿ]]ಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು. ==ಆಸಕ್ತಿಗಳು== ಅವರು ಮುಂಬಯಿಗೆ ಬಂದು, "ಕಲಾನಿಕೇತನ" ಎಂಬ ಶಾಲೆಗೆ ಸಂಜೆ-ತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ‍್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್-ತಂತ್ರಜ್ಞಾನದಲ್ಲಿ, ಶಿಕ್ಷಣ- ಪ್ರಶಿಕ್ಷಣಗಳನ್ನು ಪಡೆದು, "ಬೇಕ್ಲೈಟ್ ಹೈಲಂ" ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟ-ಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆ-ಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ.<ref>http://www.loc.gov/acq/ovop/delhi/salrp/chittal.html</ref> == ಸಾಹಿತ್ಯ ಕೃಷಿ == 'ಬೊಮ್ಮಿಯ ಹುಲ್ಲು ಹೊರೆ' ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, "ಸಂದರ್ಶನ" ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ "ಪುರುಷೋತ್ತಮ"ದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, 'ಹನೇಹಳ್ಳಿ,' ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ; ಅವರ ಪ್ರಶಸ್ತಿ ವಿಜೇತ ಕಾದಂಬರಿ, "ಪುರುಷೋತ್ತಮ" ದಲ್ಲಿ, ನಾಯಕನ ಸಿದ್ಧಿಯ ಚರಮ-ಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿ-ತುಳುಕಾಡುವುದೇ ಆಗಿದೆ. ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. " ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ- ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ."<ref>http://timesofindia.indiatimes.com/topic/Yashwant-Vithoba-Chittal/photos/</ref> ==ಕೃತಿಗಳು== ===ಕಥಾಸಂಕಲನಗಳು=== * ಸಂದರ್ಶನ (೧೯೫೬) * ಆಬೋಲಿನ (೧೯೬೦) * ಆಟ (೧೯೬೯) * ಬೇನ್ಯಾ (೧೯೮೩) * ಆಯ್ದ ಕತೆಗಳು (೧೯೭೬) * ಕಥೆಯಾದಳು ಹುಡುಗಿ (೧೯೮೦) * ಚಿತ್ತಾಲರ ಕತೆಗಳು (೧೯೮೩) * ಕುಮಟೆಗೆ ಬಂದಾ ಕಿಂದರಿಜೋಗಿ (೧೯೯೭) * ಓಡಿ ಹೇೂದಾ ಮುಟ್ಟಿ ಬಂದಾ (೨೦೦೧) * ಸಿದ್ಧಾರ್ಥ (೧೯೮೮) * ಐವತ್ತೊಂದು ಕತೆಗಳು (೨೦೦೦) * ಪುಟ್ಟನ ಹೆಜ್ಜೆ ಕಾಣೋದಿಲ್ಲಾ (೨೦೦೬) * ಕೇೂಳಿ ಕೂಗುವ ಮುನ್ನ (೨೦೧೨) * ಸಮಗ್ರ ಕತೆಗಳು ( ಸಂಪುಟ ೧ ಮತ್ತು ೨ ) (೨೦೦೯) ===ಕಾದಂಬರಿಗಳು=== * ಮೂರು ದಾರಿಗಳು (೧೯೬೪) * ಶಿಕಾರಿ (೧೯೭೯) * ಛೇದ (೧೯೮೫) * ಪುರುಷೋತ್ತಮ (೧೯೯೦) * ಕೇಂದ್ರ ವೃತ್ತಾಂತ (೧೯೯೭) * ದಿಗಂಬರ (೨೦೨೨) === ಕವನ ಸಂಕಲನ === * ದಣಪೆಯಾಚೆಯ ಓಣಿ === ಪ್ರಬಂಧ ಸಂಗ್ರಹಗಳು=== * ಸಾಹಿತ್ಯ, ಸೃಜನಶೀಲತೆ ಮತ್ತು ನಾನು (೧೯೮೧) * ಸಾಹಿತ್ಯದ ಸಪ್ತಧಾತುಗಳು (೨೦೦೧) * ಅಂತಃಕರಣ (೨೦೦೮) ==ಪ್ರಶಸ್ತಿಗಳು== * 'ಕಥೆಯಾದಳು ಹುಡುಗಿ' ಎಂಬ ಕೃತಿಗೆ ೧೯೮೩ರ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ , [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ಮತ್ತು 'ಮಹಾರಾಷ್ಟ್ರ ಗೌರವ ಪುರಸ್ಕಾರ' ದೊರಕಿದೆ. * 'ಶಿಕಾರಿ' ಕಾದಂಬರಿಗೆ ೧೯೭೯ರಲ್ಲಿ [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ವಿಶೇಷ ಪ್ರಶಸ್ತಿ ಮತ್ತು 'ವರ್ಧಮಾನ ಪ್ರಶಸ್ತಿ' ದೊರೆತಿದೆ. * 'ಪುರುಷೋತ್ತಮ' ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಭಾರತೀಯ ಭಾಷಾ ಸಂಸ್ಥಾನದ ಪ್ರಶಸ್ತಿ. * ೨೦೦೨ನೇ ಸಾಲಿನ 'ನಿರಂಜನ ಪ್ರಶಸ್ತಿ' * [[ಪಂಪ ಪ್ರಶಸ್ತಿ]] * ಮಾಸ್ತಿ ಪ್ರಶಸ್ತಿ * ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ * ಶಿವರಾಮ ಕಾರಂತ ಪ್ರಶಸ್ತಿ * ಶ್ರೀ ಗುರುನಾರಾಯಣ ಪ್ರಶಸ್ತಿ * [[ರಾಜ್ಯೋತ್ಸವ ಪ್ರಶಸ್ತಿ]] ==ನಿಧನ== ಯಶವಂತ ಚಿತ್ತಾಲ ೨೦೧೪ ರ ಮಾರ್ಚ್ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು<ref>{{Cite web |url=http://www.daijiworld.com/news/news_disp.asp?n_id=224623 |title=ಆರ್ಕೈವ್ ನಕಲು |access-date=2014-03-24 |archive-date=2014-03-25 |archive-url=https://web.archive.org/web/20140325183348/http://www.daijiworld.com/news/news_disp.asp?n_id=224623 |url-status=dead }}</ref>. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗನಿಂದ ನೆರೆವೇರಿಸಲ್ಪಟ್ಟಿತು.<ref>http://www.outlookindia.com/article.aspx?281375</ref> ==ಉಲ್ಲೇಖಗಳು== <References/> {{Interwikineeded}} [[ವರ್ಗ:ಸಾಹಿತಿಗಳು]] [[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಪಂಪ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಮುಂಬಯಿ ಕನ್ನಡಿಗರು]] [[ವರ್ಗ:ಲೇಖಕರು]] [[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಮುಂಬಯಿನ ಲೇಖಕರು]] tpjdkuzn9rjprhiwoehc81oaw8i2qo2 ರಂಗಮಂಟಪ 0 11741 1371716 1371373 2026-04-20T08:34:11Z CommonsDelinker 768 ಚಿತ್ರ Panorámica_interior_del_Teatro_Colón_(cropped).jpgರ ಬದಲು ಚಿತ್ರ Panorámica_interior_del_Teatro_Colón.jpg ಹಾಕಲಾಗಿದೆ. 1371716 wikitext text/x-wiki [[ಚಿತ್ರ:Panorámica interior del Teatro Colón.jpg|thumb|ರಂಗಮಂಟಪ]] [[ಚಿತ್ರ:Paris Comedie-Francaise.jpg|thumb|೧೮ನೇ ಶತಮಾನದಲ್ಲಿ [[ಪ್ಯಾರಿಸ್]] ನಗರದ ಒಂದು ರಂಗಮಂಟಪದ ಚಿತ್ರ]] '''ರಂಗಮಂಟಪ'''ಗಳು [[ರಂಗಕಲೆ]]ಗಳ ಪ್ರದರ್ಶನ ನಡೆಯುವ ಕಟ್ಟಡಗಳು ಅಥವಾ ಆಯಕಟ್ಟುಗಳು. '''ರಂಗಮಂಟಪ''' ಎಂಬುದು ಪ್ರದರ್ಶನ ಕಲೆಯ ಸಹಯೋಗದ ರೂಪವಾಗಿದ್ದು, ಇದು ನೇರ ಪ್ರದರ್ಶಕರನ್ನು, ಸಾಮಾನ್ಯವಾಗಿ ನಟರನ್ನು , ಒಂದು ನಿರ್ದಿಷ್ಟ ಸ್ಥಳದಲ್ಲಿ, ಹೆಚ್ಚಾಗಿ ವೇದಿಕೆಯಲ್ಲಿ , ನೇರ ಪ್ರೇಕ್ಷಕರ ಮುಂದೆ ನೈಜ ಅಥವಾ ಕಲ್ಪಿತ ಘಟನೆಯ ಅನುಭವಗಳನ್ನು ಪ್ರಸ್ತುತಪಡಿಸಲು ಬಳಸುತ್ತದೆ. ಪ್ರದರ್ಶಕರು ಈ ಅನುಭವವನ್ನು ಸನ್ನೆ , ಮಾತು , ಹಾಡು , ಸಂಗೀತ ಮತ್ತು ನೃತ್ಯದ ಸಂಯೋಜನೆಯ ಮೂಲಕ ಪ್ರೇಕ್ಷಕರಿಗೆ ತಿಳಿಸಬಹುದು . ಇದು ನಾಟಕದ ಅತ್ಯಂತ ಹಳೆಯ ರೂಪವಾಗಿದೆ , ಆದರೂ ನೇರ ರಂಗಭೂಮಿಯನ್ನು ಈಗ ಆಧುನಿಕ ರೆಕಾರ್ಡ್ ರೂಪಗಳು ಸೇರಿಕೊಂಡಿವೆ. ಚಿತ್ರಿಸಿದ ದೃಶ್ಯಾವಳಿ ಮತ್ತು ಬೆಳಕಿನಂತಹ ರಂಗಕಲೆಗಳಂತಹ ಕಲೆಯ ಅಂಶಗಳನ್ನು ಅನುಭವದ ಭೌತಿಕತೆ , ಉಪಸ್ಥಿತಿ ಮತ್ತು ತಕ್ಷಣವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಸ್ಥಳಗಳು, ಸಾಮಾನ್ಯವಾಗಿ ಕಟ್ಟಡಗಳು, ಪ್ರದರ್ಶನಗಳು ನಿಯಮಿತವಾಗಿ ನಡೆಯುವ ಸ್ಥಳಗಳನ್ನು "ರಂಗಭೂಮಿಗಳು" (ಅಥವಾ "ರಂಗಮಂದಿರಗಳು") ಎಂದೂ ಕರೆಯಲಾಗುತ್ತದೆ, ಇದು ಪ್ರಾಚೀನ ಗ್ರೀಕ್ θέατρον (ಥಿಯೇಟ್ರಾನ್, "ವೀಕ್ಷಿಸಲು ಒಂದು ಸ್ಥಳ") ನಿಂದ ಬಂದಿದೆ , ಇದು ಸ್ವತಃ θεάομαι (ಥಿಯೋಮೈ, "ನೋಡಲು", "ವೀಕ್ಷಿಸಲು", "ವೀಕ್ಷಿಸಲು"). ಆಧುನಿಕ ಪಾಶ್ಚಿಮಾತ್ಯ [[ರಂಗಭೂಮಿ]]ಯು ಹೆಚ್ಚಾಗಿ ಪ್ರಾಚೀನ [[ಗ್ರೀಸ್|ಗ್ರೀಸ್‌]]ನ ರಂಗಭೂಮಿಯಿಂದ ಬಂದಿದೆ , ಅಲ್ಲಿಂದ ಅದು ತಾಂತ್ರಿಕ ಪರಿಭಾಷೆ, ಪ್ರಕಾರಗಳಾಗಿ ವರ್ಗೀಕರಣ ಮತ್ತು ಅದರ ಅನೇಕ ವಿಷಯಗಳು , ಸ್ಟಾಕ್ ಪಾತ್ರಗಳು ಮತ್ತು ಕಥಾವಸ್ತುವಿನ ಅಂಶಗಳನ್ನು ಎರವಲು ಪಡೆಯುತ್ತದೆ. ರಂಗಭೂಮಿ ಕಲಾವಿದ ಪ್ಯಾಟ್ರಿಸ್ ಪಾವಿಸ್ ರಂಗಭೂಮಿ, ನಾಟಕೀಯ ಭಾಷೆ , ರಂಗ ಬರವಣಿಗೆ ಮತ್ತು ರಂಗಭೂಮಿಯ ನಿರ್ದಿಷ್ಟತೆಯನ್ನು ಇತರ ಪ್ರದರ್ಶನ ಕಲೆಗಳು , ಸಾಹಿತ್ಯ ಮತ್ತು ಸಾಮಾನ್ಯವಾಗಿ ಕಲೆಗಳಿಂದ ರಂಗಭೂಮಿಯನ್ನು ಪ್ರತ್ಯೇಕಿಸುವ ಸಮಾನಾರ್ಥಕ ಅಭಿವ್ಯಕ್ತಿಗಳಾಗಿ ವ್ಯಾಖ್ಯಾನಿಸುತ್ತಾರೆ. ನಾಟಕ '''ಕಂಪನಿಯು''' ನಾಟಕ ಪ್ರದರ್ಶನಗಳನ್ನು ಉತ್ಪಾದಿಸುವ ಒಂದು ಸಂಸ್ಥೆಯಾಗಿದ್ದು, ಇದು ನಾಟಕ ತಂಡದಿಂದ (ಅಥವಾ ನಟನಾ ಕಂಪನಿ) ಭಿನ್ನವಾಗಿದೆ , ಇದು ಒಟ್ಟಾಗಿ ಕೆಲಸ ಮಾಡುವ ನಾಟಕ ಪ್ರದರ್ಶಕರ ಗುಂಪಾಗಿದೆ. ಆಧುನಿಕ ರಂಗಭೂಮಿಯು ನಾಟಕಗಳು ಮತ್ತು ಸಂಗೀತ ರಂಗಭೂಮಿಯ ಪ್ರದರ್ಶನಗಳನ್ನು ಒಳಗೊಂಡಿದೆ . ಬ್ಯಾಲೆ ಮತ್ತು ಒಪೆರಾದ ಕಲಾ ಪ್ರಕಾರಗಳು ಸಹ ರಂಗಭೂಮಿಯಾಗಿದ್ದು, ನಟನೆ , ವೇಷಭೂಷಣಗಳು ಮತ್ತು ವೇದಿಕೆಯಂತಹ ಅನೇಕ ಸಂಪ್ರದಾಯಗಳನ್ನು ಬಳಸುತ್ತವೆ. ಅವು ಸಂಗೀತ ರಂಗಭೂಮಿಯ ಬೆಳವಣಿಗೆಯಲ್ಲಿ ಪ್ರಭಾವಶಾಲಿಯಾಗಿದ್ದವು . {{Unreferenced}} {{Interwikineeded}} [[ವರ್ಗ:ರಂಗಕಲೆ]] a46lzey9fdre8cmsqgeiud86rxyb0ui ಸದಸ್ಯ:Teju2friends 2 13882 1371715 838454 2026-04-19T17:26:29Z Teju2friends 1232 + Retired 1371715 wikitext text/x-wiki {{retired}} {| |- |<div style="padding: 1em; border: solid 2px #6495ed; background-color: #E0eeff;"> {{ಬಾವುಟ ಚಿಹ್ನೆ|India}} {{User ಮೈಸೂರು}} {{User wikipedia/RC Patrol}} {{Location map many | Karnataka | width = 240 | float = right | label = [[ಮಾಯಸಂದ್ರ]] | pos = top | bg1 = white | marksize = 8 | lat_deg = 13.080194 | lon_deg = 76.756646 | label2 = [[ದಾವಣಗೆರೆ]] | pos2 = top | bg2 = orange | mark2size = 8 | lat2_deg = 14.459916 | lon2_deg = 75.899077 | label3 = [[ಬೆಂಗಳೂರು]] | pos3 = bottom | bg3 = lightgreen | lat3_deg = 12.966151 | lon3_deg = 77.716231 | label4 = [[ಮೈಸೂರು]] | pos4 = bottom | bg4 = lightblue | lat4_deg = 12.339164 | lon4_deg = 76.604340 }} <br><br><br><br> ==[[File:Crystal_Clear_app_winprops.png|24px]] ಸ್ಕ್ರಿಪ್ಟ್‌ಗಳು== * '''DefineIt''' : ಕನ್ನಡ ಅಥವ ಇಂಗ್ಲಿಷ್ [[ಸದಸ್ಯ:Teju2friends/define-it.js|ಪದಗಳ ಅರ್ಥ ತೋರಿಸುವ ಸ್ಕ್ರಿಪ್ಟ್]]. * '''NumberEdit''' : ಇಂಗ್ಲಿಷ್ ಅಂಕಿಗಳನ್ನು ಕನ್ನಡಕ್ಕೆ [[ಸದಸ್ಯ:Teju2friends/number-edit.js|ಬದಲಾಯಿಸುವ ಸ್ಕ್ರಿಪ್ಟ್]] ('''ಅಭಿವೃದ್ಧಿ ಹಂತದಲ್ಲಿದೆ''' ಇದು '''1985ನೇ ಇಸವಿ''' ಇದನ್ನು '''೧೯೮೫ನೇ ಇಸವಿ''' ಎಂದು ಬದಲಾಯಿಸುತ್ತದೆ. URL ಮತ್ತು Filename ಗಳಲ್ಲಿನ ಇಂಗ್ಲಿಷ್ ಅಂಕಿಗಳನ್ನೂ ಕನ್ನಡಕ್ಕೆ ಬದಲಾಯಿಸುತ್ತಿರುವುದರಿಂದ ಇದರ ಬಳಕೆಯ ನಂತರ ಒಮ್ಮೆ ಬದಲಾವಣೆಗಳನ್ನು ಪರೀಕ್ಷಿಸಬೇಕು). * '''SpaceEdit''' : ಲೇಖನವನ್ನು [[ಸದಸ್ಯ:Teju2friends/space-edit.js|ಒಪ್ಪವಾಗಿಸುವ ಸ್ಕ್ರಿಪ್ಟ್ ]] ಕೆಳಗಿನ ಸ್ಕ್ರಿಪ್ಟ್‌ಗಳನ್ನು ಒಳಗೊಂಡಿದೆ. ** ಸಾಲಿನ ಮೊದಲು ಇರುವ white spaceಅನ್ನು ತೆಗೆಯುತ್ತದೆ. ** ಚುಟುಕು ಲೇಖನಗಳನ್ನು ಗುರುತಿಸಿ '''ಚುಟುಕು''' ಟೆಂಪ್ಮೇಟ್ ಅನ್ನು ಸೇರಿಸುತ್ತದೆ ಮತ್ತು ಚುಟುಕು ವರ್ಗಕ್ಕೆ ಸೇರಿಸುತ್ತದೆ. ** ಕನ್ನಡ ವಿಕಿಪೀಡಿಯದ ಉದ್ದ ಕೊಂಡಿಗಳನ್ನು wiki markupಗೆ ಬದಲಾಯಿಸುತ್ತದೆ. (ಉದಾ: <nowiki>[http://kn.wikipedia.org/wiki/ಮುಖ್ಯ_ಪುಟ ಕನ್ನಡ ವಿಕಿ] ಇದನ್ನು [[ಮುಖ್ಯ_ಪುಟ|ಕನ್ನಡ ವಿಕಿ]] ಎಂದು ಬದಲಾಯಿಸುತ್ತದೆ</nowiki>) ** [[ಸದಸ್ಯ:M_G_Harish|ಹರೀಶ್ ಅವರ]] [[ಸದಸ್ಯ:M_G_Harish/link-edit.js|LinkEdit]] ಸ್ಕ್ರಿಪ್ಟ್‌. (ಕೊಂಡಿಯನ್ನು ಒಪ್ಪವಾಗಿಸುತ್ತದೆ). ** [[ಸದಸ್ಯ:M_G_Harish|ಹರೀಶ್ ಅವರ]] [[ಸದಸ್ಯ:M_G_Harish/zero-edit.js|ZeroEdit]] ಸ್ಕ್ರಿಪ್ಟ್‌. (ಅನುಸ್ವಾರಗಳ ಬದಲು ಸೊನ್ನೆಯ ಬಳಕೆಯನ್ನು ತಿದ್ದಿ ಬದಲಾಯಿಸುತ್ತದೆ). ಈ ಸ್ಕ್ರಿಪ್ಟ್‌ಗಳನ್ನು ಉಪಯೋಗಿಸಲು ಸಹಾಯಕ್ಕೆ [[ಸದಸ್ಯ:Teju2friends/ಸಹಾಯ|ಈ ಪುಟ ನೋಡಿರಿ]]. ==[[File:Crystal_Clear_app_kwrite.png|24px]] ಸಧ್ಯದ ಯೋಜನೆಗಳು== * [[ವಿಕಿಪೀಡಿಯ:ಯೋಜನೆ/ಅನುವಾದಗೊಂಡ_ಲೇಖನಗಳ_ಸಂವರ್ಧನಾ_ಯೋಜನೆ]] *‌ [http://outreach.wikimedia.org/wiki/Welcome_to_Wikipedia_%28Bookshelf%29/kn Welcome to Wikipedia (Bookshelf)/kn] ==[[File:WP-pencil.png|24px]] ಪ್ರಯೋಗಾಲಯ== [[ಸದಸ್ಯ:Teju2friends/Sandbox|೦]] [[ಸದಸ್ಯ:Teju2friends/Sandbox/1|೧]] [[ಸದಸ್ಯ:Teju2friends/Sandbox/2|೨]] [[ಸದಸ್ಯ:Teju2friends/Sandbox/3|೩]] </div> |} {{Babel|kn|en-3|hi-2}} kn0zr8sm7fy2cjig9z882j1x8jhcf1j ಇಂಡೋ - ಚೀನ 0 83196 1371717 1337626 2026-04-20T10:18:07Z Artanisen 61675 Map of Indochina Burma Siam China Railway 1886 Weller.png 1371717 wikitext text/x-wiki [[File:Map of Indochina Burma Siam China Railway 1886 Weller.png|thumb|]] '''[[ಫ್ರೆಂಚ್]]''' ಸಂರಕ್ಷಿತ ರಾಜ್ಯಗಳಾಗಿದ್ದ ಟಾಂಕಿನ್, ಅನ್ನಾಂ, ಕಾಂಬೋಡಿಯ, ಲಾವೋಸ್‍ಗಳನ್ನೂ ಫ್ರೆಂಚ್ ವಸಾಹತಾದ ಕೊಚಿನ್-ಚೀನಾವನ್ನೂ ಒಳಗೊಂಡ ಪ್ರದೇಶ. ಉತ್ತರಕ್ಕೆ ಚೀನಾದ ಯುನ್ನಾನ್ ಮತ್ತು ಕ್ವಾಂಗ್ಸಿ ಪ್ರಾಂತ್ಯಗಳು; ಪೂರ್ವಕ್ಕೂ ದಕ್ಷಿಣಕ್ಕೂ ದಕ್ಷಿಣಚೀನಾ ಕಡಲು; ಪಶ್ಚಿಮಕ್ಕೆ ಥೈಲೆಂಡ್ ಮತ್ತು ಬರ್ಮಾ-ಇದು ಈ ಪ್ರದೇಶದ ಚೌತರ್ಫು. ಇಪ್ಪತ್ತನೆಯ ಶತಮಾನದ ನಡುಗಾಲದ ವೇಳೆಗೆ ಈ ಪ್ರದೇಶ ಒಡೆಯಿತು. ವಿಯೆಟ್ನಾಂ, ಕಾಂಬೋಡಿಯ ಮತ್ತು ಲಾವೋಸ್ ಎಂಬ ಮೂರು ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಟಾಂಕಿನ್, ಅನ್ನಾಂ ಮತ್ತು ಕೊಚಿನ್-ಚೀನಾ ಎಂಬ ಹೆಸರುಗಳು ಈಗ ಕ್ರಮವಾಗಿ ವಿಯೆಟ್ನಾಮಿನ ಉತ್ತರ, ಮಧ್ಯ ಹಾಗೂ ದಕ್ಷಿಣ ಭಾಗಗಳಿಗೆ ಭೌಗೋಲಿಕವಾಗಿ ಅನ್ವಯವಾಗುತ್ತವೆ. ಹಿಂದಿನ ಅನ್ನಾಂ ಚಕ್ರಾಧಿಪತ್ಯದ ಮಧ್ಯಪ್ರದೇಶಕ್ಕೆ ಸಂಬಂಧಿಸಿದಂತೆ ಮಾತ್ರವೇ ಈಗ ಅನ್ನಾಂ ಎಂಬ ಹೆಸರು ಬಳಕೆಯಲ್ಲಿದೆ. (ನೋಡಿ- ಕಾಂಬೋಡಿಯ) (ನೋಡಿ- ಲಾವೋಸ್) ಪ್ರಾಕೃತಿಕ ಭೂವಿವರಣೆ: ಇಂಡೋ-ಚೀನಾ ಪ್ರದೇಶದಲ್ಲಿ ಆಚೀಚೆಗೆ ಎರಡು ತಗ್ಗಿನ ಬಯಲುಗಳಿವೆ. ಉತ್ತರದಲ್ಲಿ ಕೆಂಪು ನದೀ ಕಣಿವೆಯೂ ದಕ್ಷಿಣದಲ್ಲಿ ಮೆಕಾಂಗ್ ಕಣಿವೆಯೂ ಇವೆರಡರ ನಡುವೆ ಪರ್ವತದ ಸಾಲೂ ಇದೆ. ಈ ಪರ್ವತಶ್ರೇಣಿಯ ಉತ್ತರ ಪಾಶ್ರ್ವದಲ್ಲಿ ಎತ್ತರದ ಪ್ರಸ್ಥಭೂಮಿಯುಂಟು. ಕರಾವಳಿಯಲ್ಲಿ ಮೆಕ್ಕಲು ಮಣ್ಣಿನ ನೆಲವೂ, ಉಪ್ಪುನೀರಿನಕೊಳ್ಳಗಳೂ, ಮರಳಗುಪ್ಪೆಗಳೂ ಇವೆ. ಮಧ್ಯವಿಯೆಟ್ನಾಮಿನ ದಕ್ಷಿಣ ಭಾಗದಲ್ಲಿ ಸುರಕ್ಷಿತವಾದ ಹಾಗೂ ಆಳವಾದ ಕೊಲ್ಲಿಗಳಿವೆ. ಉತ್ತರದ ಕಡಲ ಅಂಚಿನಲ್ಲಿ ಬೆಣಚು ಕಲ್ಲುಬಂಡೆ ತುಂಬಿದ ದ್ವೀಪಮಾಲೆ ಹಬ್ಬಿಕೊಂಡಿದೆ. ಇಂಡೋ-ಚೀನಾದ್ದು ಉಷ್ಣವಲಯದ ಮಾನ್ಸೂನ್ ವಾಯುಗುಣ. ಚಳಿಗಾಲದಲ್ಲಿ ಈಶಾನ್ಯಮಾರುತಗಳೂ ಬೇಸಗೆಯಲ್ಲಿ ನೈಋತ್ಯಮಾರುತಗಳೂ ಬೀಸುತ್ತವೆ. ಇಡೀ ಪರ್ಯಾಯದ್ವೀಪದಲ್ಲಿ ಜುಲೈ ತಿಂಗಳಲ್ಲಿ 8ಂ ಡಿಗ್ರಿ ಫ್ಯಾ.ನ ಸುತ್ತಲೇ ಉಷ್ಣತೆಯಿರುತ್ತದೆ. ಆದರೆ ಚಳಿಗಾಲದಲ್ಲಿ ದಕ್ಷಿಣಕ್ಕಿಂತ ಉತ್ತರದಲ್ಲಿ ಚಳಿ ಹೆಚ್ಚು. ಜನವರಿ ತಿಂಗಳಿನಲ್ಲಿ ಉತ್ತರ ಹ್ಯಾನಾಯ್‍ನಲ್ಲಿ 63 ಡಿಗ್ರಿ ಫ್ಯಾ. ಉಷ್ಣತೆಯಿದ್ದರೆ ಸೈಗಾನಿನಲ್ಲಿ 79 ಡಿಗ್ರಿ ಫ್ಯಾ. ಇರುತ್ತದೆ. ಇದು ಬೇಸಗೆಯ ಮಳೆಯ ಪ್ರದೇಶ. ಆದರೆ ಮಧ್ಯ ವಿಯೆಟ್ನಾಮಿನ ಕಡಲಂಚಿನಲ್ಲಿ ಚಳಿಗಾಲದಲ್ಲಿ ಮಳೆ ಹೆಚ್ಚು. ನೈಋತ್ಯ ಮಾರುತವೇ ಇದಕ್ಕೆ ಕಾರಣ. ಜುಲೈನಿಂದ ನವೆಂಬರ್ ತಿಂಗಳವರೆಗೆ ಸಾಮಾನ್ಯವಾಗಿ ತುಫಾನುಗಳೆದ್ದು ಮಳೆ ಸುರಿಯುತ್ತದೆ. ಈ ಪ್ರದೇಶದ ಮೂರನೆಯ ಎರಡು ಭಾಗ ಕಾಡು. ತಗ್ಗಿನ ನೆಲದಲ್ಲಿ ಸವನ್ನ ಹುಲ್ಲುಗಾವಲುಗಳೂ ಬೇಸಾಯದ ನೆಲವೂ ಇವೆ. ಹೆಚ್ಚು ಮಳೆ ಸುರಿಯುವ ಎಡೆಯಲ್ಲಿ ನಿತ್ಯಹಸುರಿನ ಕಾಡುಗಳು ಹಬ್ಬಿವೆ. ವರ್ಷವೆಲ್ಲ ಮಳೆ ಸುರಿಯುವ ಪ್ರದೇಶಗಳಲ್ಲಿ ಪರ್ಣಪಾತೀ (ಡೆಸಿಡ್ಯುಯಸ್) ವನಗಳಿವೆ. ಕಾಡು ಕಡಿದುಬಿಟ್ಟ ಸ್ಥಳಗಳಲ್ಲಿ ಬಿದಿರುಮೆಳೆ ಧಾರಾಳ. ಕೆಂಪು ನದಿಯ ಹಾಗೂ ಮೆಕಾಂಗ್ ನದಿಯ ಮುಖಜಭೂಮಿಗಳ ಸೆರಗಿನಲ್ಲಿ ಗುಲ್ಮವೃಕ್ಷಗಳು ಹಬ್ಬಿವೆ. ಹೆಚ್ಚು ಒತ್ತಾದ ಮರಗಳಿಲ್ಲದ ಕಾಡುಗಳಲ್ಲೂ ಸವನ್ನ ಹುಲ್ಲುಗಾವಲುಗಳಲ್ಲೂ ಆನೆ, ಹುಲಿ, ಕಾಡು ದನ, ಜಿಂಕೆ ಮುಂತಾದ ವಿಧವಿಧ ಪ್ರಾಣಿ ಸಮೂಹಗಳಿವೆ. ವ್ಯವಸಾಯ: ವ್ಯವಸಾಯವೇ ಇಲ್ಲಿನ ಮುಖ್ಯ ಕಸುಬು. ಆದರೆ ಕಾಡು ತುಂಬಿದ ಪರ್ವತ ಪ್ರದೇಶಗಳು ಹೆಚ್ಚಾಗಿರುವುದರಿಂದ ಒಟ್ಟು ನೆಲದ ಹನ್ನೆರಡನೆಯ ಒಂದು ಭಾಗಕ್ಕಿಂತ ಸ್ವಲ್ಪ ಹೆಚ್ಚು ನೆಲದಲ್ಲಿ (1,50,00,000 ಎಕರೆ) ಮಾತ್ರ ಸಾಗುವಳಿಯಾಗುತ್ತಿದೆ. [[ಭತ್ತ]] ಮುಖ್ಯ ಬೆಳೆ. ಬೇಸಾಯದ ನೆಲದ ಹತ್ತರಲ್ಲೊಂಬತ್ತು ಪಾಲು ಭತ್ತಕ್ಕೆ ಮೀಸಲು. ಕೆಂಪು ನದೀಮುಖಜಭೂಮಿಯಲ್ಲಿ ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಾರೆ. ಆದರೆ ಮೆಕಾಂಗ್ ನದಿಯ ಕುದುರಿನಲ್ಲೇ ಹೆಚ್ಚು ಫಸಲು. ಇಲ್ಲಿ ಉಪಯೋಗಿಸಿ ಮಿಕ್ಕಿದ್ದು ನಿರ್ಯಾತಕ್ಕೆ ಒದಗುತ್ತದೆ. ಈ ಎರಡು ಪ್ರದೇಶಗಳಲ್ಲೂ ನೀರಾವರಿಯ ಸೌಲಭ್ಯಗಳಿವೆ. [[ಮೆಕ್ಕೆ ಜೋಳ|ಮುಸುಕಿನ ಜೋಳ]], ಕಡಲೆಕಾಯಿ (ಸೇಂಗ), ಕಬ್ಬು, ಹೊಗೆಸೊಪ್ಪು, ಮೆಣಸು ಇವು ಇತರ ಫಸಲುಗಳು. ದನಕರು ಕಡಿಮೆ. ಏಕೆಂದರೆ ಜನಸಂಖ್ಯೆಯ ಒತ್ತಡದ ದೆಸೆಯಿಂದ ಫಲವತ್ತಾದ ಹುಲ್ಲು ನೆಲವೆಲ್ಲ ಆಹಾರಬೆಳೆಗೆ ಬೇಕು. ಪ್ಲಾಂಟೇಷನ್ ವ್ಯವಸಾಯವೂ ತಕ್ಕಮಟ್ಟಿಗೆ ಬೆಳೆದಿದೆ. ರಬ್ಬರ್ ಮುಖ್ಯ ಬೆಳೆ. ಕಾಫಿ, ಚಹ ಇವು ಇನ್ನೆರಡು ಉತ್ಪನ್ನಗಳು. ಮತ್ಸ್ಯೋದ್ಯಮವೂ ಸರ್ವೇಸಾಮಾನ್ಯ. ಅರಣ್ಯೋದ್ಯಮವೂ ಬೆಳೆಯುತ್ತಿದೆ. ಮರಕ್ಕೆ ಕ್ಷಾಮವೊದಗದಂತೆ ಅರಣ್ಯ ಸಂರಕ್ಷಣೆಯ ಕಾರ್ಯವೂ ಮುಂದುವರಿಯುತ್ತಿದೆ. ಮರದ ದಿಮ್ಮಿಗಳನ್ನು ತೆಪ್ಪಗಳಂತೆ ಕಟ್ಟಿ ಅವನ್ನು ನದಿಗಳಲ್ಲಿ ತೇಲಿಬಿಟ್ಟು ಉದ್ದಿಷ್ಟ ಪ್ರದೇಶಗಳಿಗೆ ತಲಪಿಸುತ್ತಾರೆ. ಗಣಿಗಾರಿಕೆ, ಕೈಗಾರಿಕೆ, ವ್ಯಾಪಾರ, ಸಂಚಾರ ಮಾರ್ಗ: ಕಲ್ಲಿದ್ದಲು, ಸತು, ತವರ, [[ಕಬ್ಬಿಣ]], ಚಿನ್ನ ಮತ್ತು ಫಾಸ್ಫೇಟು ಮುಖ್ಯ ಖನಿಜಗಳು. ಮೊದಲ ಮೂರು ಖನಿಜಗಳು ಹೆಚ್ಚು ಮುಖ್ಯ. ಕೆಂಪು ನದೀಮುಖಜಭೂಮಿಯ ಬಳಿಯಲ್ಲೇ ಕಲ್ಲಿದ್ದಲು ದೊರಕುತ್ತದೆ. ಇಲ್ಲಿ ಕಾರ್ಮಿಕರು ಧಾರಾಳವಾಗಿ ವಾಸಿಸುವುದರಿಂದ ಈ ಪ್ರದೇಶದಲ್ಲಿ ಹತ್ತಿ, ಜವಳಿ, ಸಿಮೆಂಟು, ಮದ್ಯಸಾರ, ಕಾಗದ ಮುಂತಾದ ಕೈಗಾರಿಕೆಗಳು ಬೆಳೆದಿವೆ. ದಕ್ಷಿಣ ವಿಯೆಟ್ನಾಮಿನ ಜೊಲಾನ್ ಎಂಬುದು ಇನ್ನೊಂದು ಮುಖ್ಯ ಕೈಗಾರಿಕಾಕೇಂದ್ರ. ಅಕ್ಕಿಯ ಗಿರಣಿಗಳೂ, ಸಕ್ಕರೆ ಕಾರ್ಖಾನೆಗಳೂ, ಹೊಗೆಸೊಪ್ಪಿನ ಕೈಗಾರಿಕೆಗಳೂ, ಮದ್ಯೋದ್ಯಮಗಳೂ ಇಲ್ಲಿ ಬೆಳೆದಿವೆ. ಯುದ್ಧಕಾಲದಲ್ಲಿ ಜಪಾನೀಯರ ಆಕ್ರಮಣದಿಂದಲೂ ಅನಂತರದ ರಾಜಕೀಯ ಅಸ್ಥಿರತೆಯಿಂದಲೂ ಈ ಪ್ರದೇಶದ ಕೈಗಾರಿಕೆ ಹಾಗೂ ವ್ಯಾಪಾರಕ್ಕೆ ತುಂಬ ಅಡಚಣೆಯೊದಗಿತ್ತ್ತು. ಈಚೆಗೆ ಪರಿಸ್ಥಿತಿ ಬಹಳ ಮಟ್ಟಿಗೆ ಸುಧಾರಿಸಿದೆ. ಅಸಿದ್ಧವಸ್ತು ಅಕ್ಕಿ, ರಬ್ಬರ್, ಕಲ್ಲಿದ್ದಲು ಮತ್ತು ಸಿಮೆಂಟು ಮುಖ್ಯ ನಿರ್ಯಾತಗಳು. ಅನ್ಯದೇಶಗಳಿಂದ ಸಿದ್ಧವಸ್ತುಗಳನ್ನು ತರಿಸಿಕೊಳ್ಳಲಾಗುತ್ತಿದೆ. ವಿದೇಶೀ ವ್ಯಾಪಾರದಲ್ಲಿ ಫ್ರಾನ್ಸಿನದೇ ಸಿಂಹಪಾಲು, ಅಮೆರಿಕ ಸಂಯುಕ್ತಸಂಸ್ಧಾನ, ಚೀನಾ, ಹಾಂಗ್‍ಕಾಂಗ್, ಸಯಾಂ, ಬ್ರಿಟನ್, ಜಪಾನ್, ಮಲಯ ದೇಶಗಳು ಈ ಪ್ರದೇಶದೊಂದಿಗೆ ವ್ಯಾಪಾರ ಮಾಡುವ ಇತರ ರಾಷ್ಟ್ರಗಳು. ನದಿಗಳೇ ಒಳನಾಡಿನ ಮುಖ್ಯ ಸಂಪರ್ಕಸಾಧನ. ಮೆಕಾಂಗ್ ಹಾಗೂ ಕೆಂಪು ನದಿಗಳೂ ಅದರ ಉಪನದಿಗಳೂ ನೌಕಾಸಂಚಾರಕ್ಕೆ ತಕ್ಕಮಟ್ಟಿಗೆ ಅನುಕೂಲಕರ. ಕರಾವಳಿಯ ಉದ್ದಕ್ಕೂ ಅಡ್ಡಕ್ಕೂ ಅನೇಕ ಸರ್ವಋತು ರಸ್ತೆಗಳಿವೆ. ಈ ರಸ್ತೆ ವ್ಯವಸ್ಥೆಯಲ್ಲಿ ಹ್ಯಾನಾಯ್-ಸೈಗಾನಗಳು ಎರಡು ಮುಖ್ಯ ಬಿಂದುಗಳು. ಸೈಗಾನಿನಿಂದ ಹೊರಟು, ಮೆಕಾಂಗ್ ಕಣಿವೆಯನ್ನು ಹಾದು, ಲುವಾಂಗ್ ಪ್ರಬಾಂಗ್ ತಲುಪುವ ಇನ್ನೊಂದು ಭೂಮಾರ್ಗ ವ್ಯವಸ್ಥೆಯಿದೆ. ರೈಲುಮಾರ್ಗವೂ ಸ್ಥೂಲವಾಗಿ ರಸ್ತೆಗಳನ್ನೇ ಅನುಸರಿಸುತ್ತದೆ. ಸೈಗಾನಿನಿಂದ ಚೀನೀ ಸರಹದ್ದಿನವರೆಗೂ ನಾಂಪೆನ್ಹ್‍ನಿಂದ ಸಯಾಮಿನವರೆಗೂ ಇರುವ ಎರಡು ರೈಲುಮಾರ್ಗಗಳು ಮುಖ್ಯ. ರೇವುಪಟ್ಟಣಗಳಲ್ಲಿ ಸೈಗಾನ್ ಮುಖ್ಯ. ಹೈಫಾಂಗ್, ನಾಂಪೆನ್ಹ್ ಇನ್ನೆರಡು ರೇವು ಪಟ್ಟಣಗಳು. ಸೈಗಾನ್, ಹೆನಾಯ್, ಹೈಫಾಂಗ್, ನಾಂ ಫೆನ್ಹ್ ಮುಖ್ಯ ವಿಮಾನ ನಿಲ್ದಾಣಗಳು. ಜನಸಾಂದ್ರತೆ, ಮತಪದ್ಧತಿ: ಹೆಚ್ಚಿನ ಪ್ರಮಾಣದಲ್ಲಿ ಜೀವನಾಧಾರದ ಬೆಳೆ ತೆಗೆಯುವುದು ಸಾಧ್ಯವಾದ ತಗ್ಗು ನೆಲಪ್ರದೇಶದಲ್ಲಿ ಜನಸಾಂದ್ರತೆ ಅತೀವವಾಗಿದೆ. ಇಡೀ ಜಗತ್ತಿನಲ್ಲೇ ಅತ್ಯಂತ ಜನದಟ್ಟಣೆಯ ಪ್ರದೇಶಗಳಲ್ಲಿ ಕೆಂಪುನದೀ ಪ್ರದೇಶವೂ ಒಂದು. ಇಲ್ಲಿ ಜನಸಾಂದ್ರತೆ ಸರಾಸರಿ ಚ.ಮೈ.ಗೆ ಸು. 1,000. ಮಧ್ಯ ವಿಯೆಟ್ನಾಂ ತೀರಪ್ರದೇಶದಲ್ಲಿ ಮೆಕಾಂಗ್ ಮುಖಜಭೂಮಿಯಲ್ಲೂ ಜನಸಾಂದ್ರತೆ ಹೆಚ್ಚು. ಪರ್ವತ ಪ್ರದೇಶದಲ್ಲಿ ಬಹು ವಿರಳ. ಅನ್ನಾಮೀ ಜನ ಹೆಚ್ಚುಸಂಖ್ಯೆಯಲ್ಲಿದ್ದಾರೆ. ತೆಳು ನಿಲುವು, ಹಳದಿ ಬಿಳುಪು ಬಣ್ಣ, ಕಪಾಲದ ಉಬ್ಬು ಮೂಳೆ, ಓರೆಗಣ್ಣು-ಇವು ಈ ಜನರ ಲಕ್ಷಣ. ಇವರ ಭಾಷೆ ಸಂಸ್ಕøತಿಗಳ ಮೇಲೆ ಚೀನೀಯರ ಪ್ರಭಾವ ಹೆಚ್ಚು. ಕನ್ಫ್ಯೂಷಿಯನ್ ಧರ್ಮವನ್ನು ಇವರು ಹೆಚ್ಚಾಗಿ ಅನುಸರಿಸುತ್ತಾರೆ. ಬೌದ್ಧಧರ್ಮೀಯರೂ ಇವರಲ್ಲುಂಟು. ಕಾಂಬೋಡಿಯನ್ನರದು ಕಪ್ಪುಛಾಯೆ, ದಪ್ಪ ಮೈಕಟ್ಟು. ಇವರು ಬೌದ್ಧಧರ್ಮಾವಲಂಬಿಗಳು. ಇವರ ನೃತ್ಯನಾಟಕಗಳಲ್ಲಿ ಬೌದ್ಧಕಥೆಗಳು ಹಾಸುಹೊಕ್ಕಾಗಿವೆ. ಇವರ ಸಂಸ್ಕøತಿಯ ಮೇಲೆ ಹಿಂದೂ ಪ್ರಭಾವವೂ ಉಂಟು. ದಕ್ಷಿಣ ಮಧ್ಯ ಇಂಡೋ-ಚೀನಾದ ಎತ್ತರ ಪ್ರದೇಶದಲ್ಲಿರುವ ಮಾಯ್ ಜನರು ಕುಳ್ಳರು, ತಾಮ್ರವರ್ಣೀಯರು. ಇವರಿಗೆ ಗುಂಗುರು ಕೂದಲೂ ಅಗಲ ಮೂಗೂ ಇವೆ. ಇವರು ಪ್ರಕೃತಿಯ ಆರಾಧಕರು. ಉತ್ತರದ ಪರ್ವತಪ್ರದೇಶದಲ್ಲಿ ಥಾಯ್ ಜನರು ಹೆಚ್ಚಾಗಿದ್ದಾರೆ. ಇವರಿಗೆ ಸಯಾಮೀಯರ ಸಂಬಂಧವಿದೆ. ಇವರದು ಮಧ್ಯಸ್ಥ ನಿಲುವು, ತೆಳುಕಂದು ವರ್ಣ. ಇವರ ಸಂಸ್ಕøತಿಯ ಮೇಲೂ ಚೀನೀ ಪ್ರಭಾವ ಹೆಚ್ಚು. ಇವರಲ್ಲದೆ ಇಲ್ಲಿ ಮಿಯಾವೊ ಮತ್ತು ಲೋಲೊ ಜನಾಂಗಗಳಿಗೆ ಸೇರಿದ ಜನರೂ ಇದ್ದಾರೆ. == ಉಲ್ಲೇಖನಗಳು == {{Unreferenced}} {{Interwikineeded}} [[ವರ್ಗ:ಏಷ್ಯಾ ಖಂಡ]] 517fa7i9gipunwqu6sa2r1cdqejap0w