ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.4 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಪುಟ:ವೈಶಾಖ.pdf/೧೯೦ 104 82119 278744 192366 2025-06-03T14:34:48Z Vikas shetty14 7896 /* Proofread */ 278744 proofread-page text/x-wiki <noinclude><pagequality level="3" user="Vikas shetty14" /></noinclude>________________ {{rh|center=|left=೧೭೪|right=ವೈಶಾಖ}} {{gap}}ತನ್ನ ಗಂಡ ಎದಿರಾಗಿ ಬೇರೋಬ್ಬಳು ಹೆಂಗಸಿನ ಪರ ವಹಿಸಿ, ಆಟವಡುವಾಗ ನಡುನಡುವೆ ಪ್ರವೇಶ ಮಾಡುತ್ತಿದ್ದುದು ಸೀತಾಲಕ್ಷ್ಮಿಗೆ ವಿಪರೀತವಾದ ಕಸಿವಿಸಿಯನ್ನುಂಟುಮಾಡಿತ್ತು. ಈಗ ಗಂಡನ ಬಾಯಿಂದ ಇಂಥ ಮಾತು ಹೊರಟ ಕೂಡಲೆ,
{{gap}}“ಇನ್ನೋಡಿ ಅಂದ್ರೆ, ನೀವು ರುಕ್ಕಗೆ ಕಾಯಿ ನಡೆಸಿಕೊಟ್ಟುಬೇಕಾದ ಹಾಗೆ ಸಹಾಯ ಮಾಡಿ. ನಾನೇನು ಬೇಡ ಅನ್ನಲ್ಲ, ಆದ್ರೆ ನಾನು ದಾಳ ಬಿಡುವಾಗಲೆಲ್ಲ ಹೀಗೆ ಏನಾದರೂ ನಾಸಬಾಯಿ ನುಡಿದು ಬೇಸರಪಡಿಸಿದರೆ, ನಾನು ಸಹಿಸಿ ಸುಮ್ಮನೆ ಕೂರಲ್ಲ” ಎಂದಳು.
{{gap}}ಕೇಶವಯ್ಯ ತನ್ನ ಎರಡೂ ಕೆನ್ನೆಗಳಿಗೆ ಹೊಡೆದುಕೊಳ್ಳುತ್ತ,
{{gap}}“ಶಾಂತಂ ಪಾಪಂ, ತಪ್ಪಾಯ್ತು.... ಇನ್ನು ಮುಂದೆ ಬಾಯಿ ಬಿಚ್ಚಲ್ಲ.” ಪಶ್ಚಾತ್ತಾಪ ಶಾಂತಂ ಪಾಪಂ-ನಟಿಸಿದ.
{{gap}}ಆದರೆ ಸ್ವಲ್ಪ ವೇಳೆ ಕಳೆಯುವುದರಲ್ಲಿ ಮರೆಮೋಸದಿಂದ ರುಕ್ಕಿಣಿಯ ಕಾಯಿಯೊಂದನ್ನು ಪಗಡೆ ಚಾರಿಯ ಮಧ್ಯದ ಚೌಕುಳಿಯಲ್ಲಿ ಮಲಗಿಸಿ, ಹಣ್ಣುಮಾಡಿಬಿಟ್ಟ- ಆಡುವವರಿಬ್ಬರಿಗೂ ತಿಳಿಯದ ಹಾಗೆ! ಆದರೆ ಆಗತಾನೇ ಒಳಗೆ ಪ್ರವೇಶಿಸಿದ ಲಕ್ಷಮ್ಮನವರು ಕೇಶವಯ್ಯನ ಕೈ ಚಳಕವನ್ನು ನೋಡಿಬಿಟ್ಟರು! ನೋಡಿದವರು ಮೌನವಾಗಿಯಾದರೂ ಇರಬಾರದೆ?
{{gap}}“ಇದೇನೆ ಸೀತಾಲಕ್ಷ, ಎತ್ತಕಡೆ ನೋಡಿಕೊಂಡು ಆಡ್ತಾ ಇದೀಯೇ?... ಆಟದ ಕಡೆ ಕೊಂಚ ನಿಗಾ ಇರಲಿ” ಎಂದು ಅನುಮಾನ ಹುಟ್ಟಿಸಿದರು
ಆ ಮಾತುಗಳು ಕಿವಿಗೆ ಬೀಳುತ್ತಲೂ ಸೀತಾಲಕ್ಷ್ಮಿಯು ಪಗಡೆ ಚಾರಿಯನ್ನೇ ಸೂಕ್ಷ್ಮವಾಗಿ ಕಣ್ಣಾಡಿಸಿ ವೀಕ್ಷಿಸಿದಳು. ಥಟ್ಟನೆ ಹಣ್ಣಿನ ಮನೆಯಲ್ಲಿ ಮಲಗಿಸಿದ್ದ ರುಕ್ಕಿಣಿಯ ಹಸಿರು, ಕಾಯಿ ಕಣ್ಣಿಗೆ ಬಿದ್ದಿತು, ಒಡನೆಯೆ,
{{gap}}“ಅಯ್ಯೋ, ಅಯ್ಯೋ- ಈ ಹಸಿರು ಕಾಯಿ ಯಾವಾಗ ಕಣ್ಣಾಯ್ತು?... ಮೋಸ, ಮೋಸ...” ಎಂದು ಕಿರುಚಿದಳು.
ಕೇಶವಯ್ಯನ ಕೈಚಳಕವನ್ನು ಗಮಿನಿಸದಿದ್ದ ರುಕ್ಕಿಣಿಯು ಏನು ಹೇಳಲೂ ಅಸಮರ್ಥಳಾಗಿ ತೆಪ್ಪೆನ ಕುಳಿತಳು. ಕೇಶವಯ್ಯ ಮಾತ್ರ ಸುಮ್ಮನಿರದೆ,
{{gap}}“ಸುಮ್ಮನೆ ಆಡೆ. ಅದನ್ಯಾರು ಈಗ ಮಲಗಿಸಕ್ಕೆ ಬಂದಿದ್ದರು?” ಎಂದುಬಿಟ್ಟ, ಸೀತಾಲಕ್ಷ್ಮಿಯ ಕೋಪ ಭುಗ್ ಎಂದಿತು.
{{gap}}“ಇಂಥ ಮೋಸದ ಆಟ ಆಡಿ ಗೆಲ್ಲದಿದ್ದರೂ ಆಗತ್ತೆ” ಎಂದು ಪಗಡೆ ಹಾಸನ್ನು ಮಗುಚಿ, ಒಳ ನಡೆದಳು.<noinclude></noinclude> 2y3a403k9oxp5l5nnccy8qubb66dog9 ಪುಟ:ವೈಶಾಖ.pdf/೧೯೧ 104 82120 278745 192367 2025-06-03T14:38:57Z Vikas shetty14 7896 /* Proofread */ 278745 proofread-page text/x-wiki <noinclude><pagequality level="3" user="Vikas shetty14" /></noinclude>________________ {{rh|center=|left=ಸಮಗ್ರ ಕಾದಂಬರಿಗಳು|right=೧೭೫}} {{gap}}ಕೇಶವಯ್ಯ ರುಕ್ಕಿಣಿಯ ಬೆನ್ನು ಸವರುತ್ತ,
{{gap}}“ನನ್ನ ಹೆಂಡತಿಯ ಸ್ವಭಾವಾನೆ ಹೀಗೆ, ಮೂಗಿನ ತುದೀಲೆ ಇರತ್ತೆ ಕೋಪ... ಇದನ್ನ ನೀನು ಮನಸ್ಸಿಗೆ ತೀರ ಹೆಚ್ಚಿಕೊಬೇಡ, ಅವಳದ್ದು-ಕ್ಷಣಪಿತ್ತ, ಕ್ಷಣ ಚಿತ್ತ... ನಾಳೆಯೂ ಬಾ. ಅಷ್ಟರಲ್ಲಿ ಅವಳನ್ನು ರಿಪೇರಿ ಮಾಡಿದ್ದೀವಿ” ಎಂದು ನಕ್ಕ.
{{gap}}ರುಕ್ಕಿಣಿಗೆ ಹೇಸಿಗೆಯೆನಿಸಿತು.
{{gap}}“ಸರಿಯೆ, ನೀನ್ಯಾಕೆ ಹಾಗೆ ಮೋಸದಿಂದ ನನ್ನ ಕಾಯಿ ಮಲಗಿಸಿದ್ದು?” ವ್ಯಗ್ರಳಾಗಿ ಕೇಳಿದಳು.
{{gap}}“ಅಯ್ಯೋ, ನೀನೂ ಸರಿ, ಮೋಸ ಮಾಡದಿದ್ರ ಈ ಜೀವನದಲ್ಲಿ ಗೆಲ್ಲಲಿಕ್ಕೆ ಅಗತ್ಯ?... ಇಡೀ ಮಹಾಭಾರದ ಕಥೆಯಲ್ಲಿ ನಾವು ಕಾಣುವದೇನು?... ಉದ್ದಕ್ಕೂ ಮೋಸ!?- ಅದೂ ಶ್ರೀಕೃಷ್ಣ ಪರಮಾತ್ಮನಿಂದಲೆ ಅದೆಲ್ಲ ನಡೆಯಿತು ಅಂದಮೇಲೆ... ಕೃಷ್ಣನ ಕುತಂತ್ರವಿಲ್ಲದೆ ಪಾರ್ಥ ಕರ್ಣನನ್ನ ಗೆಲ್ಲಲಿಕ್ಕೆ ಸಾಧ್ಯಾವಾಗ್ತಿತ್ತೆ? ಭೀಷ್ಮದ್ರೋಣಾದಿಗಳು ಸೋಲುತ್ತಾ ಇದ್ದರೆ? ಕೊನೆಗೆ ದುರ್ಯೋಧನನ್ನು ಗದಾಯುದ್ಧದಲ್ಲಿ ಭೀಮಸೇನ ಸದೆಬಡಿಯಲು ಕೂಡ ಕೃಷ್ಣ ತೊಡೆ ತಟ್ಟಿ ಸೂಚಿಸಿದ್ದು ಮಹಾ ಮೋಸವಲ್ಲವೇ?...”
{{gap}}ಕೇಶವಯ್ಯನ ಉಪನ್ಯಾಸ ಸಾಗುತ್ತಿದ್ದಂತೆಯೇ, ರುಕ್ಕಿಣಿಯು ಎದ್ದುನಿಂತಳು.
{{gap}}“ಯಾಕಮ್ಮ ಹೊರಟುಬಿಟ್ಟೆ?... ಸಂಬಾರದ ಕಾಫಿ ಮಾಡಿಸ್ತೀನಿ, ಮೈಗೆ ಒಳ್ಳೇದು ಕುಡಿದು ಹೋಗುವಿಯಂತೆ, ಇರು”
{{gap}}-ಕೇಶವಯ್ಯನ ಈ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ ರುಕ್ಕಿಣಿ ಹೊರನಡೆದಳು ಅವಳು ಕೇಶವಯ್ಯನ ಮನೆಯ ಮುಂದಿನ ಬೀದಿಯನ್ನು ದಾಟಿ ಎಡಕ್ಕೆ ಹೊರಳಿದರೆ ಅಲ್ಲಿಂದ ಆರನೆಯ ಮನೆಯ ಗಮಕಿ ಭೀಮಯ್ಯನವರ ಮನೆ. ಅವರು ಮಧ್ಯಾಹ್ನದ ವೇಳೆ ಸಾಮಾನ್ಯವಾಗಿ ಗದುಗಿನ ನಾರಣಪ್ಪನ ಭಾರವನ್ನೊ ಲಕ್ಷ್ಮೀಶನ ಜೈಮಿನಭಾರವನ್ನೊ ವಾಚಿಸುವುದು ವಾಡಿಕೆ. ಆಗ ಅವರ ಪಡಸಾಲೆಗೆ ಇತರ ಕೇರಿಗಳ ಜನರೂ ನೆರೆಯುತ್ತಿದ್ದುಂಟು. ಮನೆಯಲ್ಲಿ ನಡೆಯುವ ಈ ಭಾರತ ವಾಚನವನ್ನು ಮನೆಯ ಹೊರಗಿನ ತೆಂಗಿನ ಮರಕ್ಕೆ ಒರಗಿ ನಿಂತು, ಒಮ್ಮೊಮ್ಮೆ ರುಕ್ಕಿಣಿಯೂ ಕೆಲಸಮಯ ಆಲಿಸುತ್ತ ನಿಲ್ಲುತ್ತಿದ್ದದುಂಟು.
{{gap}}ಈ ದಿನ ಗಮಕಿ ಭೀಮಯ್ಯನವರು ಭಾರದಿಂದ ರುಕ್ಕಿಣಿಗೆ ಪ್ರಿಯವಾದ ಕರ್ಣವೃತ್ತಾಂತವನ್ನು ವಾಚಿಸುತ್ತಿದ್ದರು. ಅದನ್ನು ಕೆಲವು ಕ್ಷಣ ನಿಂತು ಆಲಿಸಬೇಕು<noinclude></noinclude> int2siapb15719o01lqyudc5gsa959m ಪುಟ:ವೈಶಾಖ.pdf/೧೯೨ 104 82121 278746 192368 2025-06-03T14:42:24Z Vikas shetty14 7896 /* Proofread */ 278746 proofread-page text/x-wiki <noinclude><pagequality level="3" user="Vikas shetty14" /></noinclude>________________ {{rh|center=|left=೧೭೬|right=ವೈಶಾಖ}} {{gap}}ಎನ್ನುವಷ್ಟರಲ್ಲಿ ಅವಳ ಹಿಂದೆ ದೂರದಲ್ಲಿ ಹಿಂಬಾಲಿಸಿ ಬರುತ್ತಿದ್ದ ಲಕ್ಷ್ಯ “ರುಕ್ಕೂ... ರುಕ್ಕೂ...” ಎಂದು ಕೂಗುತ್ತ ಬಂದು ರುಕ್ಕಿಣಿಯ ತರ್ನಯತೆಯನ್ನು ಕದಡಿದಳು. ಇನ್ನು ಅಲ್ಲಿ ನಿಂತು ಸಫಲವಿಲ್ಲವೆಂದು ರುಕ್ಕಿಣಿ ಅಲ್ಲಿಂದ ಮುಂದೆ ಅಡಿಯಿಡುತ್ತ.
{{gap}}“ಯಾಕೆ ಲಕ್ಷಮ್ಮನೋರೆ, ಏನು ಸಮಾಚಾರ?” ಎಂದು ಪ್ರಶ್ನಿಸುವಾಗ ಬೇಸರ ತುಳುಕಿತ್ತು.
{{gap}}ಲಕ್ಷ್ಮಮ್ಮ ಏದುತ್ತ ಬಂದವಳು.
{{gap}}“ಏನಿಲ್ಲ ರುಕ್ಕು, ನಮ್ಮ ಮನೇಲಿ ಅವಲಕ್ಕೆ ಮುಗಿದಿತ್ತು. ಸೀತಾಲಕ್ಷ್ಮೀನ ಕೇಳೋಣಾಂತ ಬಂದೆ. ಆದರೆ ಪಗಡೆ ಆಟದಲ್ಲಿ ಅವಳು ಮುನಿಸಿಕೊಂಡು ಎದ್ದು ಹೋದಾಗ, ಅವಳನ್ನ ಕೇಳೋದಾದರೂ ಹೇಗೆ?- ನೀನೇ ಹೇಳು?... ಅವಳೇನೋ ಕೇಳಿದರೆ ಯಾವುತ್ತೂ ಇಲ್ಲ ಅನ್ನುವ ಹೆಂಗಸಲ್ಲ. ಅಲ್ಲದೀರ ನಾನೇನು ಯಾರನ್ನೂ ಬಿಟ್ಟಿ ಕೊಡಿ ಎಂದು ಕೇಳವಲ್ಲವಲ್ಲ!- ಕಡ ಈಸಿಕೊಳ್ತಿನಿ. ವಾಯಿದೆಗೆ ಸರಿಯಾಗಿ ಹಿಂದುರುಗಿಸಿಬಿಡ್ತೀನಿ” ಎಂದರೆ ರುಕ್ಕಿಣಿಗೆ.
{{gap}}“ಮಹಾರಾಯಿತಿ, ನನ್ನಿಂದ ಸಾಲಾಗಿ ಪಡೆದ ಎಷ್ಟು ಪದಾರ್ಥಗಳನ್ನ ವಾಪಸು ಕೊಟ್ಟಿದ್ದೀರಿ?” ಎಂದು ಕೇಳಬೇಕೆನ್ನಿಸಿ, ಮರುಕ್ಷಣವೆ,
'ಇಂಥ ಭಂಡ ಸಂಗಡ ವಾದ ಮಾಡುವುದು ಮೂರ್ಖತನದ ಪರಮಾವಧಿ' ಎಂದುಕೊಳ್ಳುತ್ತ ಸಾಗುತ್ತಿರುವಂತೆ, “ರುಕ್ಕು, ನಿನ್ನಲ್ಲಿದ್ದರೆ- ಒಂದು ಅಚ್ಚೇರು ಕೊಟ್ಟಿರು, ನಾಳೆ ನಾಳಿದ್ದರಲ್ಲಿ ವಾಪಸು ಮಾಡ್ತೀನಿ” ಎಂದು ಕೇಳೇಬಿಟ್ಟಳು! ಲಕ್ಷ ಮ್ಯನ ಸ್ವಭಾವವೇ ಹಾಗೆ, ಕೇಳುವಾಗ ತನಗೆ ಅಗತ್ಯವಾದುದಕ್ಕಿನ್ನ ಹೆಚ್ಚಾಗಿ ಕೇಳಿಬಿಡುವುದು. ಕೊಡುವವರು ಅದರ ಅರ್ಧಷ್ಟನ್ನಾದರೂ ಕೊಡುವುದಿಲ್ಲವೆ?- ಎನ್ನುವ ಲೆಕ್ಕಾಚಾರ!
ರುಕ್ಕಿಣಿಯು ಒಳಗೇ ನಕ್ಕಳು. “ಅಕ್ಟೇರಿನಷ್ಟು ಇರಲಾರದು. ಇರುವಷ್ಟನ್ನು ಕೊಡ್ತೀನಿ, ಬನ್ನಿ.”
“ಇನ್ನೇನು ಮಾಡುವುದು?- ಲಭ್ಯ ಇದ್ದಷ್ಟು... ಹುಂ, ಹಾಗೇ ಮಾಡು” ಎನ್ನುತ್ತ ರುಕ್ಕಿಣಿಯನ್ನು ಹಿಂಬಾಲಿಸಿದಳು ಲಕ್ಷ್ಮಮ್ಮ. ಮನೆ ಸೇರುತ್ತಲೂ, ಒಂದು ಪಾವು ಅವಲಕ್ಕಿಯನ್ನು ತಂದಿತ್ತು, “ನಾಳೆ, ತಪ್ಪಿದರೆ ನಾಳಿದ್ದು ತಂದುಕೊಡ್ತೀರಿ ತಾನೆ?” ತಾತ್ಸಾರದಿಂದಲೇ ಕೇಳಿದಳು.
“ಓ, ಭೇಷಕ್ಕಾಗಿ ನಾಳೆ ಬೃಹಸ್ಪತಿವಾರ ಅಲ್ಲವೆ? ಸಂತೆಯಿಂದ ತರಿಸಿ,<noinclude></noinclude> aynddo1k2c3tis0dxs6iph6umktnk8y ಪುಟ:ವೈಶಾಖ.pdf/೧೯೩ 104 82122 278747 192369 2025-06-03T14:45:26Z Vikas shetty14 7896 /* Proofread */ 278747 proofread-page text/x-wiki <noinclude><pagequality level="3" user="Vikas shetty14" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೭೭}} ನಾಳೆ ರಾತ್ರಿ, ತಪ್ಪಿದರೆ ನಾಳಿದ್ದು ಬೆಳಿಗ್ಗೆ ಖಂಡಿತವಾಗಿಯೂ ತಂದುಕೊಡೇನೆ” ಎಂದವಳು, ಏನೋ ಉಪಕಾರ ಮಾಡುವವಂತೆ ಸಮೀಪಕ್ಕೆ ಬಂದು, ದನಿ ತಗ್ಗಿಸಿ ನುಡಿದಳು:
{{gap}}“ರುಕ್ಕು, ಆ ಕೇಶವಯ್ಯನ ಮನೆಗೆ ವಿಶೇಷವಾಗಿ ಹೋಗಬೇಡಮ್ಮ. ನೆರೆಮನೆ ಹೆಂಗಸಿಗೆ ನೆಗೆದು ಮುತ್ತು ಕೊಡುವ ಜಾತಿ!... ನಾನು ಹೀಗೆ ಹೇಳಿದೆ ಅಂದು ಬೇಸರಪಟ್ಟುಕೊಬೇಡಮ್ಮ.”
{{gap}}ಮಡಿಲಿಗೆ ತುಂಬಿದ ಅವಲಕ್ಕಿಯನ್ನು ಭದ್ರ ಮಾಡಿಕೊಳ್ಳುತ್ತ ಲಕ್ಷಮ್ಮ ಬೀದಿಗೆ ಇಳಿದಳು.ಯಾವುದಾದರೂ ಪದಾರ್ಥವನ್ನು ಈಸಿಕೊಳ್ಳುವಾಗ ಇಂಥದೊಂದು ಉಪಚಾರ ಮಾತಾಡುವುದು ಲಕ್ಷ ಮೃನಿಗೆ ರೂಢಿಯಾಗಿತ್ತು!
{{gap}}ಐದಾರು ದಿನಗಳ ಹಿಂದೆ ಇದೇ ಲಕ್ಷಮ್ಮ ಬೆಲ್ಲದಚ್ಚು ಕೇಳಲು ಬಂದಾಗ, ತಾನು ಊಟ ಮುಗಿಸಿ, ಒಂದು ಬೆಳ್ಳಿಯ ಲೋಟದ ತುಂಬ ಹಾಲು ಕುಡಿಯುತ್ತಿದ್ದಳು. ಬಾಲ್ಯದಿಂದಲೂ ಹಾಲು-ಅದರಲ್ಲೂ ಹಸುವಿನ ಹಾಲ ರುಕ್ಕಿಣಿಗೆ ತುಂಬ ಪ್ರಿಯವಾದ ಪಾನೀಯ! ಬೆಲ್ಲದಚ್ಚು ತೆಗೆದುಕೊಂಡು ಲಕ್ಷ ಮ್ಮ ಗಮ್ಮನೆ ಹೋಗಬಾರದಿತ್ತೆ?...
{{gap}}ನಾಚಿಕೆ ಕೆಟ್ಟ ಹೆಂಗಸು.
{{gap}}“ಹಾಲು ಕುಡಿಯಬೇಡವೆ, ರುಕ್ಕು-ಹಾದರ ಮಾಡುವ ಹಾಗಾಗುತ್ತೆ” ಅಂದುಬಿಡುವುದೆ?
೧೬ ಸಂತೆಯಿಂದ ಬಂದ ಮಾರನೆಗೇ ಮರಿ ಕಡಿದು ತುಪ್ಪಟ ಮಾರಿದರು. ಆ ರಾತ್ರಿ ಅವರ ಗುಡ್ಡಿನಲ್ಲಿ ಹಬ್ಬದ ಅಡಿಗೆಯ ಸಡಗರ. ಆ ರಾತ್ರಿಯ ಔತಣಕ್ಕೆ ನಿಂಗಯ್ಯನ ಅಣ್ಣ ಕುಳುವಾಡಿ ಕುಂದೂರಯ್ಯನನ್ನೂ ಕರೆದಿದ್ದರು. ಅಣ್ಣನ ಮುಂದೆ ಕುಡಿಯುವುದಕ್ಕೆ ನಿಂಗಯ್ಯ ಹೆದರುತ್ತಿದ್ದ. ಆ ಕಾರಣದಿಂದಲೇ ಅಣ್ಣ ತಮ್ಮ ಗುಡ್ಲಿಗೆ ಬರುವುದಕ್ಕೆ ಮುನ್ನವೇ ಸೋರೆಬುರುಡೆಯಲ್ಲಿ ತುಂಬಿಸಿ ರಾಚನ ಸೇಂದಿ ಅಂಗಡಿಯಿಂದ ತರಿಸಿದ್ದ ಹೆಂಡವನ್ನೆಲ್ಲ ಹೀರಿ ಮುಗಿಸಿದ್ದ. ಕುಂದೂರಯ್ಯ ತಮ್ಮನ ಗುಡ್ಡು ತಡಿಕೆಬಾಗಿಲಿನಲ್ಲಿ ಬಗ್ಗೆ ಒಳಗೆ ಬರುವ ವೇಳೆಗಾಗಲೆ, ಗುಡ್ಡಿಗೊಳಗೆ ದೀವಿಗೆ ಹೊತ್ತಿಸಿ ಎಷ್ಟೋ ಸಮಯ ಕಳೆದಿತ್ತು. ಆಗಲೆ- ಅಷ್ಟು ಹೊತ್ತಿನ ತನಕ ಕಿಲಿಕಿಲಿ ನಗುತ್ತು ಆಡುತ್ತಿದ್ದ ಕೂಸಿಗೆ ಮೊಲೆಯೂಡಿ ಸಿವುನಿ, ಒಂದು ಪಕ್ಕದಲ್ಲಿ ಹಾಸಿದ್ದ ದುಪ್ಪಟಿ ಮೇಲೆ ಉರುಳಿಸಿ, ಮಲಗಿದ್ದಳು...<noinclude></noinclude> 3ww80uqj25545vnaeais0i5fmrncjzp