ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.45.0-wmf.8 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ ಪುಟ:ವೈಶಾಖ.pdf/೧೯೬ 104 82125 278771 192372 2025-07-06T05:07:14Z Vikas shetty14 7896 /* Proofread */ 278771 proofread-page text/x-wiki <noinclude><pagequality level="3" user="Vikas shetty14" /></noinclude>{{rh|center=|left=೧೮೦|right=ವೈಶಾಖ}} ಇದ್ದಂತೆ. ವೋಟಲ್ಲಿ, ವಂದಿಗೇ ಬತ್ತಿದ್ದ ಚಿಲ್ಲರೆ ಅಂಗಡಿ ಸೂಸಾನಮ್ಮ ಅಂಗೂ ಅವರ ಗೆಣೆಕಾರ ಪಿಳಿಪ್ಪು ಇಬ್ಬರೂವೆ ಅವ್ರು ಬಿದ್ದೋಗದಂಗೆ ತಬ್ಬಿ ಇಡಿದು ಎಂಗೆಂಗೂ ಮೆತ್ತಮೆತ್ತಗೆ ನಡುಸಿಗುತ್ತ ಉಪಾಯಾಗಿ ಕಿರಿಸ್ತಾನ ದೊಡ್ಡಿಗೆ ಅಮ್ಮ ತಟಾಯಿಸಿ, ಸುಸಾನಮ್ಮ ಅಂಗಡಿ ಮನೆ ಕೂಡಿದ್ರಂತೆ!
{{gap}} ಆ ಸೂಸನಮ್ಮ ಅಂಗಡಿ ಮನೇಲಿ ಪೂರಾ ನಾತ್ರೆ ಕ್ವಿಂಟಾಗಿ ಬಿದ್ದಿದ್ದ ನಮ್ಮಣ್ಣ ಪುಟ್ಟಾರಿಗೆ ಬೆಳುಕು ಅರೀಫ್ ಎಚ್ಚರಾದಾಗ ತನ್ನೆದುರೆ ಕೆಪ್ಪಟೆ ಕೆಂಪು ಲಂಗ ಉಟ್ಟು, ತೆಳೆ ಬೆಳೆ ಸುಳುದಾಡ್ತಿದ್ದ ಸುಸಾನಮ್ಮ ಅರೇದೆಣ್ಣು ಲೂಸಿ ಅನ್ನಾಳ ಕಂಡ ಬೆರುಗಾಡ್ರಂತೆ!... ಅವನೆದ್ದದ ಗಮ ತಟಕ್ಕೆ ಓಡೋಗಿ ಟೀ ಕಾಯ್ಕಿ ಗಾಜಿನ ಗಳಾಗ್ನಲ್ಲಿ ತಂದು ಕೃಷ್ಣಂತೆ ಲೂಸಿ... “ನೀ ಯಾರು?” ಮುಟ್ಟಾರಣ್ಣ ಉಸುರಿದ್ದಂಗೇಯ, ಇಂದುಗಡೀಂದ ಬಂದ ಸೂಸಾನಮ್ಮ, “ಯಾಕಪ್ಪ, ಇವುಳುನನ್ನ ಮಗಳು, ಲೂಸಿ” ಅಂದ್ದಂತೆ. ಸರಿ, ಅಂದು-ಮೊಖ ತಳಕಂಡು, ಲೂಸಿ ಕ್ವಟ್ಟ ಟೀ ಹೀರಿ, ಪುಟ್ಟಾರಿ-
{{gap}} “ಅಪ್ಲೋಯ್, ನಾತ್ರೆ ಪೂರಾ ನಿಮ್ಮ ಗುಡ್ಡಲ್ಲೆ ಮನಗಿಬುಟ್ಟಿದ್ಮಾ? ಸರಿಕವ್ವ ನಾತ್ರೆ ಯೆಲ್ಲೋಗಿದ್ದೆ ಅಂದ್ರೆ, ನಮ್ಮಯ್ಯಂಗೆ ಯಾನಂತ ಜಬಾಬು ಕೂಡ್ಲಿ?”- ಪೇಚಾಡದಂತೆ – ಅದುಕೆ, {{gap}}“ಅದ್ಯಾಕಪ್ಪ ಮೊಸ್ಸು ಪೇಚಾಡೀ? -ಯೇನಾರ ಒಂದು ಸುಳ್ಳು ಜೋಡುಸುದ್ರಾಯ್ತು” ಅನ್ನಾದ ಸೂಸಾನಮ್ಮ?
{{gap}}ನಮ್ಮ ಪುಟಾರಣ್ಣ ಫಟ್ ಅಂತ ಯೋಳಿದಂತೆ: {{gap}}“ಸುಳ್ಳು ತಪವಟ ನನ್ನ ಜಲ್ಮದಾಗೆ ಬರನಿಲ್ಲ. ನಡದುದ್ದು ನಡದಂಗೆ ಯೋನಿ, ಅಯ್ಯನ ಕುಟ್ಟೆ... ಮಾಡಿದ ತೆಪ್ಪಗೆ ಅಯ್ಯ ಬಲ್ಕಿದ್ರೆ ಬಲ್ಕಿಸ್ಕತ್ತೀನಿ.”
{{gap}} ಅಂಗೇನೆ ಆಯ್ತು. ಅಣ್ಣ ಯೋಳಿದ್ದ ಕ್ಯಾಳಿ ದೊಡ್ಡಯ್ಯ ರಾಂಗ್ ರಾಂಗ್ ಆದ.
{{gap}}“ನೀ ಕುಡೀತಾನೇಂತ ನಂಗೂ ಬಂದಿತ್ತು ಕನ್ಹ. ನಾ ನಂಬಿಲ್ಲ. ಈಗ ನೀನೇಯ ರುಜ್ವಾತು ಮಾಡಿ ಯೋಳ್ತಿದ್ದಾಗ ಇನ್ನೇನ ಉಳಿದಿರಾದು?... ನೀನು ಚಿಕ್ಕೋನು ಪುಟ್ಟೋನು ಆಗಿದೆ, ದಡಿ ತಕ್ಕಂಡು ಚಮಚ ಸುಲೀತಿದ್ದೆ. ಈಗ ದಾನ ಧಡಿಯ ಆಗಿ ಬೆಳುದು ನಿಂತಿದ್ದೀ. ಈಗ ನಿಂಗೇನು ಯೋಳೊ ಅಂಗಿದ್ದದ್ದು?- ನನ್ನತ್ರ ಒಂದೇ ಮಾತು: ಪುನಾ ಈ ಇಂಗೇನಾರ ಅನಾವುತ ಮಾಡ್ಕಂಡು ಆ ಕಿರಿಸ್ತಾನದ ಲೌಡಿ ತಾವಿಕ ಯೇನಾರ ಹ್ವಾದೆ, ಆಮ್ಯಾಕೆ ನನ್ನ ಗುತ್ತಿಗೆ ಮಾತ್ರ ನೀ ಕಾಲ ಆಕಬಾರು. ಈ ಮಾತು ಗಟ್ಟಿ-ತಿಳುಕೊ...”<noinclude></noinclude> fm10ym8f4ml0gvtky0nwhmv99jlz5yy ಪುಟ:ವೈಶಾಖ.pdf/೧೯೭ 104 82126 278772 192373 2025-07-06T05:17:22Z Vikas shetty14 7896 /* Proofread */ 278772 proofread-page text/x-wiki <noinclude><pagequality level="3" user="Vikas shetty14" /></noinclude>{{rh|center=|left=ಸಮಗ್ರ ಕಾದಂಬರಿಗಳು|right=೧೮೧}} {{gap}}ಅಣ್ಣ ತಲೆ ತಗ್ಗುಸಿದ, “ಆಗ್ಲಿ” ಅಂದ ಸೊರ ಅವುನ ಗಂಟುಲಲ್ಲೇ ಸಿಕ್ಕಂತೆ... ಅಯ್ಯಂಗೆ ಆ ಸೊರ ಕೇಳುಸೋ ಇಲ್ಲೊ-ಅಂತ, ನಡುದ ಪುರಾಣಾನೆಲ್ಲ ನನ್ನ ಕುಟ್ಟೆ ಬಿಚ್ಚಿದ...
{{gap}} ಆದ್ರೆ ತನ್ನಯ್ಯನ ಕುಟ್ಟೆ ಅಡ್ಡ ಮಾತ ಉಳುಸಿಕಳಕ್ಕೆ ಅವುನ ಕಯ್ಯಲ್ಲಿ ಆಗನಿಲ್ಲ. ಒಂದೇಡು ವಾರ ಸುಮ್ಮಿದ್ರೋನು, ಮನಾ ಕಿರಿಸ್ತಾನ ದೊಡ್ಡಿ ಈಚಲು ಪ್ಯಾಟೆಗೆ ನಮ್ಮಣ್ಣನ ಸವಾರಿ ಚಿತ್ತೈಸಕ್ಕೆ ಸುರು ಮಾಡ್ಕತ್ತು... ಮುನಾ ಇಂದಲಂಗೇಯ ಮಾಯಕಾತಿ ಸೂಸಾನಮ್ಮ ನಮ್ಮಣ್ಣಂಗೆ ಭರ್ತಿ ಕುಡುಸಿ ಮೆತ್ತ ಮೆತ್ತಗೆ ತನ್ನ ಅಂಗಡಿಮನೆಗೆ ಕರಕಂಡೋಗಿ, ಯತಾ ಪರ್ಕಾರ ಹಾಸಿಗೆ ಹಾಸಿ ಮನಗಿಸಿದ್ಲು...
{{gap}}ಈ ಸಲ ಮಾತ್ರ ಅಣ್ಣ ಬೆಳುಗ್ಗೆ ಕಣ್ಣುಬುಟ್ಟಾಗ, ಸೂಸಾನಮ್ಮ ಮಗಳು ಲೂಸಿ ಆ ಕ್ವಾಣೇಲಿ ಸುಳಿದಾಡ್ತ ಇರನಿಲ್ಲ. ನೇರ್ಪಾಗಿ ಅವುನ ಮೊಗ್ಗಲಲ್ಲೇಯ ಕಾಲು ನೀಡಿ ಮನಗಿದ್ಲು!...
{{gap}}ಸರಿ. ನಡೀಬಾರದ್ದು ನಡದೋಯ್ತು , ಮಾತ್ರ ಆ ಸಂಗತಿ ಆದದ್ದೆ ಆದದ್ದು ನಮ್ಮ ಮುಂದೆ ಒಂದು ತಿಂಗಳು ಆ ಈಚಲು ವನಕಾಗಿ ಸೂಸಾನಮ್ಮ ಅಂಗಡಿ ಮನೆಗಾಗಿ ಕಾಲಿಡನಿಲ್ಲ. ಆಮ್ಯಾಕೊಂದು ಜಿನ ಹುಣಸೂರು ಬೇಸ್ತವಾರ ಸಂತೇಲಿ ನಮ್ಮ ಪುಟ್ಟಾರಿಯೂ ನಾನೂ ವೋಯ್ತಾ ಕರೋನೂವೆ, ಅದೆಲ್ಲಿ ಕಾಯ್ತಾ ಇದ್ದಳೊ ಸೂಸಾನಮ್ಮ?- ಎಣ ಕಂಡೇಟಿಗ ರಣದ್ದು ಮುತ್ತೋತರ, ಭಗ್ಗನೆ ಬಂದು,
{{gap}}“ನನ್ನೆಣ್ಣೆಗೆ ತಲೆ ಕೆಡುಸಿಬುಟ್ಟು ಹೊಂಟೋದೋನು, ನಮ್ಮ ದೊಡ್ಡಿದಕ್ಕೆ, ಪನಾ ತಿರುಗೂ ನ್ಯಾಡಬ್ಯಾಡದ?... ಪಾಪ, ಆ ನನ್ನ ಕಂದ ನಿನ್ನ ಚಿಂತೆ ಹೊರ ಬಂದು ಹಾಸ್ಟೆ ಇಡುದು ಮನಗದೆ!... ಈಟು ಜಿನ ಆಯ್ತು. ಒಂದು ಸರ್ತಿ ಆದರೂ ಬಂದು ಮೊಖ ತೋರುಸಿ ವೋಗಿದ್ರೆ, ಅದ್ಯೆ ಏಟೊ ನೆಮ್ಮದಿ ಸಿಕ್ಕುತ್ತಿತ್ತು... ಊ, ಈಗಲೂ ಯೇನ ಸೂರೋದು?- ಕೆಟ್ಟೋದು ಅಡುಗೆಯ ಲಿಪೇರಿ ಮಾಡುದ್ರಾಯ್ತು, ಈಗೇಯ ನನ್ನ ಜತೆ ಮೊಂಟು ಬಾ. ಅರೆಕ್ಷಣ ಅವುಗಳಿಗೆ ನಿನ್ನ ಮೊಖ ತೋರುಸಿ, ಏಡು ಸಮಾದಾನ್ನ ಮಾತಾಡಿ ಬಂದುಬುಡು. ವೊಸ್ಸು ಮಾಡುದ್ರೆ, ಯೆಲ್ಲಾನು ಮರತು ಬುತ್ತದೆ. ನನ್ನ ಕಂದ” ಅಂದ್ಲು.
{{gap}}ಅಣ್ಣ ಪೆಚ್ಚಾದ.
{{gap}}“ಇನ್ನೊಂದು ಜಿನ ಬರೀನಿ” ಅಂತ ಬೇತುಕಂಡ.
{{gap}}ಆಪ್ಪಯ್ಯ ಅಂದರೂವೆ ಅವಳು ವಪ್ಪುನೇ ಇಲ್ಲ.
{{gap}}ಇನ್ನೇನು ಮಾಡಕ್ಕಾದಾತು?- ಅಣ್ಣ ಅವಳ ಜೂತೆ ವೋಗನೆಬೇಕಾಯ್ತು.<noinclude></noinclude> pym35q5emsj2simrzraafzbr54lp1bz