ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.46.0-wmf.23
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಿಂಗ್, ವಿಲಿಯಂ
0
12332
283115
41943
2026-04-14T14:35:43Z
VASANTH S.N.
1335
ಪರಿಷ್ಕರಣೆ
283115
wikitext
text/x-wiki
ಕಿಂಗ್, ವಿಲಿಯಂ
1663-1712. ಇಂಗ್ಲಿಷ್ ಕವಿ ಚತುರೋಕ್ತಿ ಹಾಗೂ ವಿವಿಧ ರಿತಿಯ ಬರಹಗಳಿಗೆ ಪ್ರಸಿದ್ಧನಾದವ. 1685ರಲ್ಲಿ ಆಕ್ಸ್‍ಫರ್ಡ್ ವಿಶ್ವ ವಿದ್ಯಾನಿಲಯದ ಪದವಿ ಪಡೆದು, ಕಾನೂನನ್ನು ಅಭ್ಯಾಸಮಾಡಿ, ಅನಂತರ ಸಾಹಿತ್ಯ ರಚನೆಗೆ ತೊಡಗಿದ. ಮಾನವ ಸ್ವಭಾವದಲ್ಲಿನ ದೌರ್ಬಲ್ಯವನ್ನು ಗುರುತಿಸುವ ಶಕ್ತಿ ಪಡೆದಿದ್ದ ಈತ ಕಟುವಿಮರ್ಶಕನಾಗಿಯೂ ಇದ್ದ. ಆದರೆ ಈತನ ಬರವಣಿಗೆಯಲ್ಲಿನ ಹಾಸ್ಯದ ಹೊನಲು ವಿಮರ್ಶೆಯ ತೀಕ್ಷ್ಣತೆಯನ್ನು ಕಡಿಮೆ ಮಾಡಿರುವುರಿಂದ ಈತ ಹೆಚ್ಚಿನ ಜನಪ್ರಿಯತೆಗೆ ಕಾರಣನಾಗಿದ್ದಾನೆ.
ಟೋರಿ ಮತ್ತು ಹೈಚರ್ಚ್ ಪಕ್ಷಪಾತಿಯಾಗಿ ಅನೇಕ ಲಘು ಗ್ರಂಥಗಳನ್ನು ಬರೆದ. ಟೋರಿಪಕ್ಷದ ನಾಯಕ ವಿಲಿಯಂ ಷರ್ಲಾಕ್ ಮತ್ತು ವಿರೋಧಪಕ್ಷದ ರಾಬರ್ಟ್ ಸೌತ್ ಕ್ರೈಸ್ತ ತ್ರಿಮೂತಿvತ್ವವನ್ನು ಕುರಿತು ನಡೆಸಿದ ವಾಗ್ವಾದಗಳನ್ನು ಕುರಿತು ಈತ ಒಂದು ಲಘುಪತ್ರಕವನ್ನು ಬರೆದನಲ್ಲದೆ ದಿ ಬ್ಯಾಟಲ್ ರಿಯಲ್ ಎಂಬ ಲಾವಣಯನ್ನು ರಚಿದ. ರಾಬರ್ಟ್ ಮೋಲ್ಸ್‍ವರ್ತ್ ಡೆನ್‍ಮಾರ್ಕಿನ ಸರ್ಕಾರ ಪದ್ಧತಿಯನ್ನು ಟೀಕಿಸಿದ. ಅದಕ್ಕೆ ಪರಿಣಾಮಕಾರಿ ಪ್ರತ್ಯುತ್ತರ ಬರೆದ (1694). ಇದಕ್ಕಾಗಿ ಡೆನ್ಮಾರ್ಕ್ ವಿಶ್ವವಿದ್ಯಾನಿಲಯ ಕಿಂಗ್ಗೆ ಧನ್ಯವಾದವನ್ನರ್ಪಿಸಿತು. ಜೊತೆಗೆ ರಾಜಕುಮಾರಿ ಆನ್‍ಳ ಕಾರ್ಯದರ್ಶಿಯ ಕೆಲಸ ಸಿಕ್ಕಿತು. 1699ರಲ್ಲಿ ಬೆಂಟ್ಲೆಯನ್ನು ಅಣಕವಾಡಿ ಡೈಲಾಗ್ಸ್ ಆs qq ಎಂ ಪುಸ್ತಕವನ್ನು ಅತ್ಯಂತ ಚತುರೋಕ್ತಿಯಿಂದ ಬರೆದ. ತನಗೆ ಹಾಲು ನೀಡುತ್ತಿದ್ದ ಕೆಂಪು ಹಸುವನ್ನು ಕುರಿತು ''ಮಲ್ಲಿ ಆಫ್ ಮನ್‍ಟೌನ್'' (1704) ಕವನ ರಚಿಸಿದ. 1701ರಲ್ಲಿ ಅರ್ಲ್ ಆs ಅಂಗೆಲ್ಸೆಯ ದಾಂಪತ್ಯ ವಿಚ್ಛೇದನದ ಬಗ್ಗೆ ಲಾಡ್ರ್ಸ್ ಸಬೆಯಲ್ಲಿ ವಾದಿಸಿ ಜಯಿಸಿದ. ಇದರಿಂದ ಕಿಂUU ಐರ್ಲೆಂಡಿನ ನ್ಯಾಯಾಧೀಶ ಸ್ಥಾನ ದೊರಕಿತು. ಆದರೆ ಆ ಕೆಲಸದಲ್ಲಿ ಈತನಿಗೆ ಆಸಕ್ತಿಯಿರಲಿಲ್ಲ.
ಇಂಗ್ಲೆಂಡಿಗೆ ಹಿಂದಿರುಗಿ 1708ರಲ್ಲಿ ಹೊರೇಸನ ದಿ ಆರ್ಟ್ ಆಫ್ ಪೊಯಟ್ರಿ ಪದ್ಯವನ್ನನುಸರಿಸಿ ದಿ ಆರ್ಟ್ ಆಫ್ ಕುಕರಿ ಎಂಬ ಕವನವನ್ನು ಪ್ರಕಟಿಸಿದ. ಸಮಕಾಲೀನ ಜ್ಞಾನವನ್ನು ಗೇಲಿ ಮಾಡಿ ಯೂಸ್‍ಫುಲ್ ಟ್ರಾನ್ಸ್ಯಾಕ್ಷನ್ ಇನ್ ಫಿಲಾಸಫಿ ಎಂಬ ಗ್ರಂಥವನ್ನು ರಚಿಸಿದ (1709). ಪ್ರಬಂಧಕಾರ ಸ್ಟೀಲ್ ನಡೆಸುತ್ತಿದ್ದ ಟ್ಯಾಟ್ಲರ್ ಮತ್ತು ದಿ ಎಕ್ಸಾಮಿನಮೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದ. ಮೈತುಂಬ ಸಾಲ ಮಾಡಿ. ತೀರಿಸಲಾಗದೆ ಸೆರೆಮನೆ ವಾಸವನ್ನೂ ಅನುಭವಿಸಿದ. 1711ರಲ್ಲಿ ಈತನಿಗೆ ಹುದ್ದೆಯೊಂದು ದೊರಕಿದರೂ ಇಷ್ಟವಿಲ್ಲದೆ ಮರುವರ್ಷ ಅದನ್ನು ಬಿಟ್ಟ.
ಈತನ ಕವಿತೆಗಳಲ್ಲಿ ಹಾಸ್ಯ ಮತ್ತು ಸ್ವೋಪಜ್ಞತೆ ಮಿಂಚುತ್ತವೆ. 1788ರಲ್ಲಿ ಈತನ ಬರಹವೆಲ್ಲ ಒಂದು ಸಂಪುಟದಲ್ಲಿ ಪ್ರಕಟವಾಯಿತು.
(ಟಿ.ವಿ.ಎಸ್.)
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
rwczbhd6tsnq49v9tbeozrhbso23nsf