ಪದ್ಮ ವಿಭೂಷಣ
From Wikipedia
| ಭಾರತ ಪದಕಗಳು ಮತ್ತು ಪುರಸ್ಕಾರಗಳು |
| ಶೌರ್ಯ ಪರಮ ವೀರ ಚಕ್ರ |
| ಅಸಾಧಾರಣ ಸೇವೆ ಸರ್ವೋತ್ತಮ ಯುದ್ಧ ಸೇವಾ ಪದಕ |
| ನಾಗರಿಕ ರಾಷ್ಟ್ರೀಯ ಸೇವೆ |
ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಉದ್ಧರಣಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪುರಸ್ಕಾರ ಮಾಡುತ್ತಾರೆ.
ಪದ್ಮ ವಿಭೂಷಣವನ್ನು ೨ ಜನವರಿ ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.
[ಬದಲಾಯಿಸಿ] ೨೦೦೬ ರ ಪುರಸ್ಕೃತರು
| ಹೆಸರು | ಕ್ಷೇತ್ರ | ರಾಜ್ಯ |
|---|---|---|
| ಅಡೂರು ಗೋಪಾಲಕೃಷ್ಣನ್ | ಕಲೆ – ಸಿನಿಮಾ | ಕೇರಳ |
| ಸಿ ಆರ್ ಕೃಷ್ಣಸ್ವಾಮಿ ರಾವ್ | ನಾಗರಿಕ ಸೇವೆ | ತಮಿಳುನಾಡು |
| ಚಾರ್ಲ್ಸ್ ಕೊರ್ರಿಯ | ವಿಜ್ನಾನ ಮತ್ತು ಇಂಜಿನಿಯರಿಂಗ್ | ಮಹಾರಾಷ್ಟ್ರ |
| ಮಹಾಶ್ವೇತಾ ದೇವಿ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
| ನಿರ್ಮಲಾ ದೇಶಪಾಂಡೆ | ಸಾಮಾಜಿಕ ಸೇವೆ | ದೆಹಲಿ |
| ನಾರ್ಮನ್ ಬೊರ್ಲಾಗ್ | ವಿಜ್ನಾನ ಮತ್ತು ಇಂಜಿನಿಯರಿಂಗ್ | ಮೆಕ್ಸಿಕೊ |
| ಒಬೇದ್ ಸಿದ್ದಿಕಿ | ವಿಜ್ನಾನ ಮತ್ತು ಇಂಜಿನಿಯರಿಂಗ್ | ಕರ್ನಾಟಕ |
| ಪ್ರಕಾಶ ನಾರಾಯಣ ಟಂಡನ್ | ವೈದ್ಯಕೀಯ | ದೆಹಲಿ |
| ನ್ಯಾಯಮೂರ್ತಿ ವಿ ಎನ್ ಖರೆ | ಸಾರ್ವಜನಿಕ ಸೇವೆ | ಉತ್ತರ ಪ್ರದೇಶ |

