ಜೀವನ ಚೈತ್ರ
From Wikipedia
| ಜೀವನ ಚೈತ್ರ |
|
| ಬಿಡುಗಡೆ ವರ್ಷ | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ದಾಕ್ಷಾಯಿಣಿ ಸಿನಿ ಕಂಬೈನ್ಸ್ |
| ನಾಯಕ | ಡಾ.ರಾಜ್ಕುಮಾರ್ |
| ನಾಯಕಿ | ಮಾಧವಿ |
| ಪೋಷಕ ವರ್ಗ | ಕಲಾ, ಶ್ರೀರಕ್ಷಾ, ಸುಜಾತ, ಸುಧಾರಾಣಿ, ಬಾಲರಾಜ್ |
| ಸಂಗೀತ ನಿರ್ದೇಶನ | ಉಪೇಂದ್ರಕುಮಾರ್ |
| ಕಥೆ / ಕಾದಂಬರಿ | ವಿಶಾಲಾಕ್ಷಿ ದಕ್ಷ್ಣಿಣಾಮೂರ್ತಿ |
| ಚಿತ್ರಕಥೆ | |
| ಸಂಭಾಷಣೆ | |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್ಕುಮಾರ್ |
| ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
| ನೃತ್ಯ | |
| ಸಾಹಸ | |
| ಸಂಕಲನ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕರು | ಪಾರ್ವತಮ್ಮ ರಾಜ್ಕುಮಾರ್ |
| ಪ್ರಶಸ್ತಿಗಳು | ಈ ಚಿತ್ರದ ನಾದಮಯ ಈ ಲೋಕವೆಲ್ಲಾ ಗೀತೆಯ ಗಾಯನಕ್ಕೆ ಡಾ.ರಾಜ್ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತು |
| ಇತರೆ ಮಾಹಿತಿ | ವಿಶಾಲಾಕ್ಷಿ ದಕ್ಷ್ಣಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ. |
ಜೀವನ ಚೈತ್ರ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ.
ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗು ಡಾ.ರಾಜ್ಕುಮಾರ್ ಅವರ ಹಲವಾರು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

